1 Thessalonians 4

ದೇವರಿಗೆ ಮೆಚ್ಚಿಕೆಯಾದ ಜೀವನ

1ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ
4:1 1 ಕೊರಿ. 11:2:
ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ.
2ಅದುದರಿಂದ
4:2 ಎಫೆ. 4:1:
ನೀವು ಹೇಗೆ ನಡೆದು
4:2 ಕೊಲೊ. 1:10:
ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು
4:2 ಫಿಲಿ. 4:9:
ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.

3
4:3 ರೋಮಾ. 6:19, 22; 1 ಕೊರಿ. 1:30; 2 ಥೆಸ. 2:13; 1 ತಿಮೊ. 2:15; ಇಬ್ರಿ. 12:14:
ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ.
4:3 1 ಕೊರಿ. 6:18:
ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು.
4
This verse is empty because in this translation its contents have been moved to form part of verse 1Th 4:5.
In this translation, this verse contains text which in some other translations appears in verses 1Th 4:4-1Th 4:5.
5
4:4-5 ಕೀರ್ತ. 79:6; ಗಲಾ. 4:8:
ದೇವರನ್ನರಿಯದ
4:4-5 ಎಫೆ. 4:17:
ಅನ್ಯಜನರಂತೆ
4:4-5 ರೋಮಾ. 1:26:
ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ
4:4-5 ಅಥವಾ, ಸ್ವಂತ ಘಟವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಲು.
ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.
6ಈ ವಿಷಯದಲ್ಲಿ
4:6 1 ಕೊರಿ. 6:8:
ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ
4:6 ರೋಮಾ. 13:4; 12:19:
ಕರ್ತನು ಪ್ರತೀಕಾರ ಮಾಡುವವನಾಗಿದ್ದಾನೆ.

7ದೇವರು ನಮ್ಮನ್ನು ಅಶುದ್ಧಿಗಾಗಿ ಕರೆಯದೆ
4:7 1 ಥೆಸ. 4:3; 1 ಪೇತ್ರ. 1:15:
ಶುದ್ಧರಾಗಿರುವುದಕ್ಕೆ ಕರೆದನು.
8ಹೀಗಿರಲು
4:8 ಲೂಕ. 10:16:
ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ
4:8 1 ಯೋಹಾ. 3:24; 4:13:
ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ.

9
4:9 ಇಬ್ರಿ. 13:1
ಸಹೋದರ ಸ್ನೇಹದ ವಿಷಯದಲ್ಲಿ
4:9 1 ಥೆಸ. 5:1:
ನಿಮಗೆ ಬರೆಯುವ ಅವಶ್ಯಕತೆಯಿಲ್ಲ,
4:9 ಯೋಹಾ. 13:34:
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.
10
4:9 1 ಥೆಸ. 1:7:
ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ,
4:10 1 ಥೆಸ. 3:12:
ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ.
11ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು
4:11 2 ಥೆಸ. 3:11; 1 ಪೇತ್ರ. 4:15:
ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ
4:11 ಜ್ಞಾ. 17:14:
ಸುಮ್ಮಗಿದ್ದು,
4:11 2 ಥೆಸ. 3:12:
ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ,
4:11 ಅ. ಕೃ. 18:3; ಎಫೆ. 4:28:
ಕೈಯಾರೆ ಕೆಲಸಮಾಡಿ ದುಡಿಯಿರಿ.
12ಹೀಗಿದ್ದರೆ ನೀವು
4:12 ಮಾರ್ಕ. 4:11; 1 ಕೊರಿ. 5:12, 13; ಕೊಲೊ. 4:5; 1 ತಿಮೊ. 3:7:
ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ.

ಯೇಸು ಕರ್ತನು ಪುನರಾಗಮನ

13ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು,
4:13 ಎಫೆ. 2:12:
ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ
4:13 ಯಾಜ. 19:28; ಧರ್ಮೋ. 14:1; 2 ಸಮು. 12:20-23; ಮಾರ್ಕ. 5:39:
ದುಃಖಿಸಬಾರದು ಎಂಬುದೇ ನಮ್ಮ ಬಯಕೆ.
14
4:14 1 ಕೊರಿ. 15:13; 2 ಕೊರಿ. 4:14; ಪ್ರಕ. 1:18:
ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ
4:14 ಅಥವಾ, ದೇವರು ನಿದ್ರೆ ಹೋದವರನ್ನು ಸಹ ಯೇಸುವಿನ ಮೂಲಕವಾಗಿ ಆತನೊಡನೆ.
ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ
4:14 1 ಕೊರಿ. 15:18:
ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ.
15ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ,
4:15 1 ಥೆಸ. 2:19:
ಕರ್ತನು ಪುನರಾಗಮಿಸುವವರೆಗೆ
4:15 1 ಕೊರಿ. 15:51:
ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ.

16ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ,
4:16 ಯೂದ. 9:
ಪ್ರಧಾನದೂತನ ಶಬ್ದದೊಡನೆಯೂ,
4:16 ಮತ್ತಾ 24:31; 1 ಕೊರಿ. 15:52:
ದೇವರ ತುತ್ತೂರಿ ಧ್ವನಿಯೊಡನೆಯೂ
4:16 ಮತ್ತಾ 16:27; 2 ಥೆಸ. 1:7:
ಆಕಾಶದಿಂದ ಇಳಿದುಬರುವನು.
4:16 1 ಕೊರಿ. 15:23; 2 ಥೆಸ. 2:1; ಪ್ರಕ. 14:13:
ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು.
17ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ
4:17 ದಾನಿ. 7:13; ಅ. ಕೃ. 1:9:
ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ
4:17 ಯೋಹಾ. 12:26:
ಕರ್ತನ ಜೊತೆಯಲ್ಲಿರುವೆವು.
ಆದಕಾರಣ ಈ ಮಾತುಗಳಿಂದ
4:18 1 ಥೆಸ. 5:11:
ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.

18

Copyright information for KanULB